ಪರಮಪೂಜ್ಯ ದಲೈ ಲಾಮಾ ಅವರಿಂದ ಸಂದೇಶ

ಇಪ್ಪತ್ತೊಂದನೇ ಶತಮಾನವು ಮುಂದುವರೆದಂತೆ, ಮಾಹಿತಿಯ ಜಾಗತಿಕ ಹಂಚಿಕೆಗಾಗಿ ಇಂಟರ್ನೆಟ್ ಹೆಚ್ಚು ವ್ಯಾಪಕವಾದ ಮತ್ತು ಪ್ರಮುಖವಾದ ಮಾಧ್ಯಮವಾಗುತ್ತಿದೆ. ಬೌದ್ಧ ಬೋಧನೆಗಳು, ಅದರ ಇತಿಹಾಸ ಮತ್ತು ಟಿಬೆಟಿಯನ್ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳಿಗೂ ಇದನ್ನು ಅನ್ವಯಿಸಬಹುದಾಗಿದೆ. ವಿಶೇಷವಾಗಿ, ಪುಸ್ತಕಗಳು ಮತ್ತು ಅರ್ಹ ಶಿಕ್ಷಕರು ಕಡಿಮೆಯಿರುವ ಸ್ಥಳಗಳಲ್ಲಿ ಇಂಟರ್ನೆಟ್ ಅಸಂಖ್ಯಾತ ಜನರಿಗೆ ಮಾಹಿತಿಯ ಮುಖ್ಯ ಮೂಲವಾಗಿದೆ.

ತಪ್ಪು ತಿಳುವಳಿಕೆ ಮತ್ತು ಪಂಥೀಯವಾದವು ಸಾಮಾನ್ಯವಾಗಿರುವ ಜಗತ್ತಿನಲ್ಲಿ, ಅಪಶ್ರುತಿಯನ್ನು ಉತ್ತೇಜಿಸುವ ಅಜ್ಞಾನವನ್ನು ತೊಡೆದುಹಾಕಲು ಶಿಕ್ಷಣವು ಅತ್ಯಂತ ಶಕ್ತಿಶಾಲಿಯಾದ ಸಾಧನವಾಗಿದೆ. ಹಾಗಾಗಿ ಡಾ. ಅಲೆಕ್ಸಾಂಡರ್ ಬರ್ಜಿನ್ ಅವರ ಬಹು-ಭಾಷಾ ವೆಬ್‌ಸೈಟ್ www.berzinarchives.com ಅನ್ನು ನಾನು ಸ್ವಾಗತಿಸುತ್ತೇನೆ, ಇದು ಬೌದ್ಧಧರ್ಮ ಮತ್ತು ಟಿಬೆಟಿಯನ್ ಸಂಸ್ಕೃತಿಯ ವಿವಿಧ ಶಾಲೆಗಳು ಮತ್ತು ಅಂಶಗಳನ್ನು ಒಳಗೊಂಡಿರುವ ವ್ಯಾಪಕವಾದ ಲೇಖನಗಳು ಆನ್‌ಲೈನ್‌ನಲ್ಲಿ, ಜಾಗತಿಕವಾಗಿ ಲಭ್ಯವಾಗುವಂತೆ ಮಾಡಿರುವ ಮೌಲ್ಯಯುತ ಶೈಕ್ಷಣಿಕ ಸಾಧನವಾಗಿದೆ.

ಜನವರಿ 26, 2007
ಪರಮಪೂಜ್ಯ ದಲೈ ಲಾಮಾ

Top